Step into an infinite world of stories
ಪ್ರಮುಖ ಕಾದಂಬರಿಕಾರ ಎಸ್. ಎಲ್. ಭೈರಪ್ಪನವರ ’ಧರ್ಮಶ್ರೀ’ ಕಾದಂಬರಿಯು ಪಾಶ್ಚಿಮಾತ್ಯರ ಮತಾಂತರಗಳನ್ನು ಕುರಿತು ಚರ್ಚಿಸುತ್ತದೆ. ಆರ್ ಎಸ್ ಎಸ್ ಮತ್ತು ಸಂಘ ಪರಿವಾರ ಮತಾಂತರ ಚರ್ಚೆಗಳನ್ನು ಕೈಗೆತ್ತಿಕೊಂಡು ದೇಶದಾದ್ಯಂತ ದ್ವೇಷ ಭಾವನೆಯನ್ನು ಬಿತ್ತುತ್ತಿರುವ ಸಂದರ್ಭದಲ್ಲಿ ’ಧರ್ಮಶ್ರೀ’ ಕೃತಿ ರಚನೆಯಾಯಿತು.
ಹಿಂದೂಸ್ಥಾನಕ್ಕೆ ಹೊರಗಿನಿಂದ ಅಲೆಯಲೆಯಾಗಿ ಬಂದ ಜನಕ್ಕೆ ಲೆಕ್ಕವಿಲ್ಲವಾದರೂ ಅವರಲ್ಲಿ ಬಹುಭಾಗ ಜನರು ಸಾಂಸ್ಕೃತಿಕವಾಗಿ ಇಲ್ಲಿಯವರೇ ಆದರು. ರಾಷ್ಟ್ರಕ್ಕೆ ಹೊರಗಿನಿಂದ ಬಂದ ಮತಪ್ರಚಾರಕರು ಮಾತ್ರ ಇಲ್ಲಿಯ ಸಂಸ್ಕೃತಿಗೆ ತದ್ವಿರುದ್ಧವಾದ ಬೇರೊಂದು ಸಂಸ್ಕೃತಿಯನ್ನು ಬಿತ್ತಲು ಪ್ರಯತ್ನಿಸಿದರು. ಮತಾಂತರವು ಕೆಲವು ವ್ಯಕ್ತಿಗಳ ಜೀವನದಲ್ಲಿ ಆಕಸ್ಮಿಕವಾಗಿ ನಡೆಯುವ ಘಟನೆಯಲ್ಲ. ಅದೊಂದು ಸಾಂಸ್ಕೃತಿಕ ಘರ್ಷಣೆ. ಭಾರತೀಯ ಪರಂಪರೆಯಲ್ಲಿ ಧರ್ಮ, ಸಂಸ್ಕೃತಿ, ಎರಡೂ ಅವಿಭಿನ್ನವಾದ ರೂಪಗಳು. ಮತಾಂತರದಿಂದ ಸಂಭವಿಸುವ ಸಾಂಸ್ಕೃತಿಕ ಘರ್ಷಣೆಯ ಸ್ವರೂಪವೆಂತಹುದು ಎಂಬುದೇ ‘ಧರ್ಮಶ್ರೀ’ಯ ವಸ್ತು. ನಾಯಕನ ಜೀವನ ಮತ್ತು ಸಮಸ್ಯೆ , ಎರಡೂ ಒಂದೇ ಆಗಿರುವುದರ ಬಗ್ಗೆ ಈ ಕಾದಂಬರಿ ಪ್ರಸ್ತಾಪಿಸುತ್ತದೆ.
© 2023 Storyside IN (Audiobook): 9789355444363
Release date
Audiobook: 10 December 2023
English
India